ಕರ್ನಾಟಕ ಪ್ರೆಸ್‍ ಕ್ಲಬ್‍ವು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ಸಂಘಗಳ ಜಿಲ್ಲಾ ನೊಂದಾವಣಾಧಿಕಾರಿಗಳ ಕಛೇರಿ 1ನೇ ವಲಯ, ಬೆಂಗಳೂರು ನಗರ ಜಿಲ್ಲೆಯಲ್ಲಿ ದಿನಾಂಕ 22-11-2017 ರಂದು ನೊಂದಾವಣೆಯಾಗಿದ್ದು ನೊಂದಾವಣೆ ಸಂಖ್ಯೆ DRB-1/SOR/498/2017-18 ಇದು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960 (1960ನೇ ಇಸವಿ 17ನೇ ಕೃಪಾಂಕದ ಕರ್ನಾಟಕದ ಅಧಿನಿಯಮದ ಪ್ರಕಾರ) ನೊಂದಣಿ ಹೊಂದಿದ್ದು ಪ್ರತಿ ವರ್ಷವು ಲೆಕ್ಕ ಪತ್ರ ಪರಿಶೋಧನೆ ಮತ್ತು ರಿನಿವಲ್ ಆಗುತ್ತಿದೆ. ಕರ್ನಾಟಕ ಪ್ರೆಸ್‍ಕ್ಲಬ್‍ನ ಖಾಯಂ ಸದಸ್ಯತ್ವ ಹೊಂದಿರುವ ಶ್ರೀ ಎಂ. ದಯಾನಂದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಎಸ್.ಜಿ  ಇನ್ನು 6 ಜನ ಸದಸ್ಯರನ್ನೊಳಗೊಂಡ ಸಂಘವು ನೊಂದಾವಣೆಯಾಗಿದೆ. ಕರ್ನಾಟಕ ಪ್ರೆಸ್‍ಕ್ಲಬ್‍ವು ತನ್ನ ಹೆಸರನ್ನು ಟಿ.ಎಂ. ನಲ್ಲಿ ನೊಂದಾವಣಿ ಮಾಡಲು 28-10-2020ರಂದು ಅಪ್ಲಿಕೇಷನ್ ಸಂಖ್ಯೆ 4721494 ಸಲ್ಲಿಸಿದೆ. ಹೀಗೆ ಭಾರತೀಯ ಕಾನೂನುಗಳ ಪ್ರಕಾರ ಕಾನೂನಿನ ಎಲ್ಲಾ ಮಾನದಂಡಗಳನ್ನು ಪೂರೈಸಿದೆ. ಕ್ಲಬ್ ಆಗಿದ್ದು ಈ ಕ್ಲಬ್‍ನಲ್ಲಿ ಈಗಾಗಲೇ 2000 ಕ್ಕಿಂತಲೂ ಅಧಿಕ ಸದಸ್ಯರನ್ನು ಒಳಗೊಂಡಿದೆ. ಬೆಂಗಳೂರು ನಗರ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಮತ್ತು ಗೋಕಾಕ್, ಗಂಗಾವತಿ, ಹೂವಿನ ಹಡಗಲಿ, ಚಳ್ಳಕೆರೆ, ಹಾಸನ ಗುಂಡ್ಲುಪೇಟೆ ಸೇರಿದಂತೆ ಹಲವರು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳಿದ್ದು ಇನ್ನೂ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸಮಿತಿಗಳು ರಚನೆಯಾಗುತ್ತಿವೆ. ಈ ಎಲ್ಲಾ ಭಾಗದಲ್ಲಿ ಸಮಿತಿಗಳು ತಮ್ಮ ಸಾಮಾಜಿಕ ಮತ್ತು ಮಾಧ್ಯಮ ಧರ್ಮದ ಪರಿಪಾಲನೆಯನ್ನು ಮಾಡುತ್ತಾ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕರ್ನಾಟಕ ಪ್ರೆಸ್‍ಕ್ಲಬ್‍ವು ಉತ್ತಮ ಗುರಿ ಮತ್ತು ಆಸೆಯೊಂದಿಗೆ ಕಟ್ಟಿರುವ ಕ್ಲಬ್ ಆಗಿದ್ದು ಉತ್ತಮರಿಗೆ ಸ್ಥಾನಮಾನಗಳ ಜೊತೆಗೆ ಯೋಗ್ಯವಾದ ಗೌರವ ದೊರೆಯುತ್ತದೆ.