ಕರ್ನಾಟಕ ಪ್ರೆಸ್ ಕ್ಲಬ್‍ವು ಕರ್ನಾಟಕದಲ್ಲಿರುವ ಎಲ್ಲಾ ಮಾಧ್ಯಮ ಮಿತ್ರರು ಅಂದರೆ ಎಲ್ಲಾ ರೀತಿಯ ಮಾಧ್ಯಮದಲ್ಲಿ ಬೇರೆ ಬೇರೆ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮಾಧ್ಯಮದವರನ್ನು ಒಂದೇ ವೇದಿಕೆಯಲ್ಲಿ ಗುರುತಿಸುವ ಮೂಲಕ ಮಾಧ್ಯಮದವರ ಮೇಲೆ ಹೊರಗಿನ ಹಲ್ಲೆಗಳು ಮತ್ತು ಒಳಗಿನ ಒತ್ತಡಗಳನ್ನು ತಗ್ಗಿಸಿ ಮಾಧ್ಯಮದವರನ್ನು ಸರ್ವ ಸ್ವತಂತ್ರ ಒತ್ತಡ ಮುಕ್ತವಾಗಿ ಕೆಲಸ ನಿರ್ವಹಿಸುವುದು.

ಮಾಧ್ಯಮದ ಕುಟುಂಬಗಳಿಗೆ ಆಂತರಿಕ ಭದ್ರತೆ ಭವಿಷ್ಯದ ಭದ್ರತೆಗಳನ್ನು ಒದಗಿಸುವುದರ ಮೂಲಕ ಮಾಧ್ಯಮ ಧರ್ಮವನ್ನು ಎತ್ತಿ ಹಿಡಿಯುವುದು, ಮಾಧ್ಯಮ ಕ್ಷೇತ್ರವು ಜಾತಿ, ಧರ್ಮ ಮತ್ತು ರಾಜಕೀಯ ಮುಕ್ತವಾಗಿರಬೇಕು. ಪ್ರಜಾಪ್ರಭುತ್ವಕ್ಕೆ ಬಲ ಬರಬೇಕಾದರೆ ಮಾದ್ಯಮವು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಅಂತಹ ವಾತಾವರಣವನ್ನು ಮರು ಸೃಷ್ಠಿ ಮಾಡಲು ಕರ್ನಾಟಕ ಪ್ರೆಸ್ ಕ್ಲಬ್‍ವು ಉದ್ದೇಶವನ್ನು ಹೊಂದಿದೆ.