ಭಾರತೀಯ ಸಂವಿಧಾನವು 1950 ಜನವರಿ 26 ರಂದು ಜಾರಿಗೆ ಬಂದಿತು. ವಿಶ್ವದ ಅತ್ಯಂತ ದೊಡ್ಡ ಸಂವಿಧಾನ ಏಕೆಂದರೆ ಅಮೇರಿಕಾದಂತಹ ದೇಶಗಳ ಶೇ 30% ರಷ್ಟು ಹೆಚ್ಚು ಒಟ್ಟಾರೆ 1,46,385 ಪದಗಳ ಬಳಕೆಯಲ್ಲಿ ರಚನೆಯಾದ ಬೃಹತ್ ಸಂವಿಧಾನವಾಗಿದೆ. ಈ ಸಂವಿಧಾನದ ಮೂಲ ಸೃಷ್ಠಿಕರ್ತರು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ರಚನಾ ಸಮಿತಿಗಳು ಹಲವಾರು ದೇಶಗಳನ್ನು ಸುತ್ತಿ ಅಧ್ಯಯನ ಮಾಡಿ ದೇಶದ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಠಿಯಿಂದ ರಚನೆಯಾಗಿದೆ. government of India act 1935 ಮತ್ತು Indian independence act 1947 ರ  ಪ್ರಭಾವ ಮತ್ತು ನೇರ ಬೆಳಕು ಚೆಲ್ಲುತ್ತಾ ಭಾರತೀಯ ಸಂವಿಧಾನವು ರಚನೆ ಆಗಿರುವುದರಿಂದ ದೇಶದ ಜನರ ಅಭಿವೃದ್ಧಿ ಸ್ವಾತಂತ್ರ ಮತ್ತು ಧಾರ್ಮಿಕ ಸ್ವಾತಂತ್ರಗಳ0ತಹ ಮುಂತಾದ ಮಾನವ ಅಭಿವೃದ್ಧಿ ಸ್ನೇಹಿ ಕಾನೂನುಗಳ ರಚನೆ ಆಗಿದೆ. ಡಾ||ಬಿ.ಆರ್.ಅಂಬೇಡ್ಕರ್ ರವರು ಸುಮಾರು 60 ದೇಶಗಳ ಸಂವಿಧಾನ ಅಧ್ಯಯನ  ಮಾಡುವ ಮೂಲಕ ಭಾರತೀಯ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಈ ಕಾರಣದಿಂದ ಭಾರತೀಯ ಸಂವಿಧಾನದ ಪಿತಾಮಹ ಎಂದು ಅಂಬೇಡ್ಕರ್‌ರವರನ್ನು ಕರೆಯುತ್ತಾರೆ. ಭಾರತ ಸಂವಿಧಾನದ ಜನರ ಆಶೋತ್ತರವಾದ ಹಕ್ಕುಗಳು ಈ ದೇಶದ ಪ್ರತಿಯೊಬ್ಬ ನಾಗರೀಕರಿಗೂ ದೊರೆಯುತ್ತದೆ. ಕಾರ್ಮಿಕ ವರ್ಗ , ಸಾಮಾನ್ಯ ಜನರು, ಬಡವ, ಶ್ರೀಮಂತ, ಉದ್ಯಮಿ, ಪತ್ರಕರ್ತ ಎನ್ನದೇ ಎಲ್ಲರಿಗೂ ಸಮಾನವಾದ ಮತ್ತು ಅಭಿವೃದ್ಧಿ ಶೀಲ ಕಾನೂನುಗಳು ರಚನೆಯಾಗಿವೆ. ಮೂಲ ಸಂವಿಧಾನದಲ್ಲಿ ಮಾಧ್ಯಮಕ್ಕೆ ಸಂಬ0ಧಿಸಿದ ವಿಶೇಷ ಕಾನೂನುಗಳು ಇಲ್ಲದಿದ್ದರೂ ಕೂಡ ಬೇರೆ ಕಾನೂನುಗಳು ಮತ್ತು ಹಕ್ಕುಗಳು ಪತ್ರಕರ್ತ ಮತ್ತು ಪತ್ರಿಕೆಗಳಿಗೆ ರಕ್ಷಣೆ ನೀಡಲಾಗಿತ್ತು. ನಮ್ಮ ಮೂಲಭೂತ ಹಕ್ಕುಗಳು

  1. ಸಮಾನತೆಯ ಹಕ್ಕು
  2. ಸ್ವಾತಂತ್ರದ ಹಕ್ಕು
  3. ಶೋಷಣೆಯ ವಿರುದ್ದ ಹಕ್ಕು
  4. ಧಾರ್ಮಿಕ ಸ್ವಾತಂತ್ರದ ಹಕ್ಕು
  5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
  6. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು

ಮೇಲಿನ 5 ಹಕ್ಕುಗಳ ಅನುಷ್ಠಾನಕ್ಕೆ ಸಂವಿಧಾನಿಕ ಪರಿಹಾರ ಪಡೆಯುವ ಹಕ್ಕು ಅಂದರೆ “ಸಂವಿಧಾನಾತ್ಮಕ ಪರಿಹಾರಗಳ ಹಕ್ಕು” ಈ ಕಾರಣದಿಂದ ಡಾ||ಬಿ.ಆರ್.ಅಂಬೇಡ್ಕರ್ ಅವರು 32 ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದರು. ಈ ಹಕ್ಕುಗಳು ಭಾರತದ ಪ್ರತಿಯೊಬ್ಬ ನಾಗರೀಕರಿಗೂ ದೊರೆಯುತ್ತದೆ. ಉದ್ಯೋಗ ,ಧರ್ಮ,ಜಾತಿ ಮತ್ತು ಭಾಷೆ ಮುಂತಾದ ವಿಷಯಗಳಿಂದ ಯಾವುದೇ ವ್ಯಕ್ತಿಗೂ ಸಂವಿಧಾನದ ಹಕ್ಕುಗಳನ್ನು ನಿರ್ಭಂಧಿಸುವುದಿಲ್ಲ. ಈ ಹಕ್ಕುಗಳ ಜೊತೆಗೆ ಭಾರತೀಯ ನಾಗರೀಕರಿಗೆ ಕರ್ತವ್ಯಗಳನ್ನು ಕೂಡ ತಿಳಿಸಲಾಗಿದೆ. ಈ ಎಲ್ಲಾ ವಿಚಾರದಲ್ಲೂ ಭಾರತೀಯ ಪತ್ರಕರ್ತ ಮತ್ತು ಮಾಧ್ಯಮ ಸಂಸ್ಥೆ ಅಥವಾ ಮಾಧ್ಯಮ ಕಾರ್ಮಿಕನಿಗೂ ಅನ್ವಯಿಸುತ್ತದೆ. ಭಾರತದಲ್ಲಿ ಪತ್ರಿಕೋಧ್ಯಮ ಆದರೂ ಕೂಡ

  1. ಮಾಧ್ಯಮಗಳಿಗೆ / ಪತ್ರಕರ್ತನಿಗೆ ಯಾವುದೇ ಹಕ್ಕು ಭಾಧ್ಯತೆಗಳಿಲ್ಲ.
  2. ಯಾವುದೇ ರೀತಿಯ ವಿನಾಯಿತಿ ಇಲ್ಲ.
  3. ವೃತ್ತಿ ಸ್ವಾತಂತ್ರಯವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.
  4. ಬರೆದದ್ದು ಅಥವಾ ಬಿತ್ತರಿಸಿದ್ದು ಸತ್ಯವೇ ಆಗಿದ್ದರೂ ಪತ್ರಿಕೆ/ ಪತ್ರಕರ್ತ ಅದರ ಪರಿಣಾಮಗಳನ್ನು ಎದುರಿಸುವುದು ಸುಲಭದ ಮಾತಾಗಿಯೇ ಉಳಿದಿಲ್ಲ ತೂಗುಕತ್ತಿ ತೂಗುತ್ತಿರುತ್ತದೆ.
  5. ಪತ್ರಕೆ ಮೇಲೆ ನಿರ್ಭಂಧ , ಸೆನ್ಸಾರ್ ಹೇರಿಕೆ ಮಾಧ್ಯಮಗಳ ವಾಗ್ದಂಡನೆ, ದುಷ್ಕರ್ಮಿಗಳ ದಾಳಿ ಸಾಮಾನ್ಯ ಪತ್ರಕರ್ತನ ಅಪಹರಣ, ಕೊಲೆ, ಹಲ್ಲೆ ಸಾಮಾನ್ಯ.  ಜಗತ್ತಿನ ಮಾಧ್ಯಮದ ಸ್ವಾತಂತ್ರಯ ಸೂಚ್ಯಾಂಕದಲ್ಲಿ ಭಾರತವು 147ನೇ ಸ್ಥಾನದಲ್ಲಿ ಇರುವುದು ಅತ್ಯಂತ ಖೇದಕರ ವಿಷಯವಾಗಿದೆ. ಅಂದರೆ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ದೇಶದಲ್ಲಿ ಮಾಧ್ಯಮ ಸ್ವಾತಂತ್ರವು ಹಲವಾರು ಬಾರಿ ಮೊಟಕುಗೊಳ್ಳುತ್ತಿದ್ದು  ಇದರಿಂದ ನಿಷ್ಠಾವಂತ ಪತ್ರಕರ್ತರು ಸಣ್ಣ ಮಾಧ್ಯಮಗಳು ಬಲಹೀನ ಆಗುತ್ತಿದೆ. ಮಾಧ್ಯಮ ಕಾನೂನುಗಳು (media law) ಅಷ್ಟು ಪರಿಣಾಮಕಾರಿಯಾಗಿಲ್ಲ. ಭಾರತ ಸಂವಿಧಾನದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರöವನ್ನು ಅಳವಡಿಸಲಾಗಿದೆ. ಈ ಸ್ವಾತಂತ್ರöವು ಸಾಮಾನ್ಯ ನಾಗರೀಕನಿಗೆ ಇರುವಂತೆಯೇ ಪತ್ರಕರ್ತರಿಗೂ ಇದೆ. ಅಂದ ಮಾತ್ರಕ್ಕೆ ಪತ್ರಕರ್ತರು ಸರ್ವತಂತ್ರ ಸ್ವತಂತ್ರರೇನಲ್ಲ ಕಣ್ಣಲ್ಲಿ ನೋಡಿದ್ದು, ಕಿವಿಯಲ್ಲಿ ಕೇಳಿದ್ದು ತಮ್ಮ ಅನುಭವಕ್ಕೆ ಬಂದದ್ದನ್ನೆಲ್ಲಾ ಬರೆಯುವ ಮುಕ್ತ ಅವಕಾಶವಿದ್ದರೂ ಪತ್ರಕರ್ತರು ಅನೇಕ ವಿಷಯಗಳಲ್ಲಿ ಕಾನೂನಿನ ಪ್ರತಿಬಂಧಕಗಳ ಚೌಕಟ್ಟಿನಲ್ಲೇ ಕೆಲಸ ಮಾಡಬೇಕಾಗುತ್ತದೆ. ಸಂವಿಧಾನವು ಸ್ವಾತಂತ್ರö ನೀಡುವ ಜೊತೆಗೆ ನಿರ್ಬಂಧ ಕೂಡ ಹೇರುತ್ತದೆ.” ಸ್ವಾತಂತ್ರöವು ಹೆಚ್ಚಾದರೆ ಸ್ವೆಚ್ಚಾರವಾಗುತ್ತದೆ” ಎಂದು ಗಾಂಧೀಜಿಯವರ ಮಾತು ಕೂಡ ಒಪ್ಪಲೇಬೇಕಾಗುತ್ತದೆ. ಭಾರತೀಯ ಸಂವಿಧಾನವು ಸಹಜ ಪ್ರಜೆಗಳ ಖಾಸಗಿ ಜೀವನದ ಗೌಪ್ಯತೆಯನ್ನು ಕಾಪಾಡಲು ನಮ್ಮ ಸಮಾಜದ ನೈತಿಕ ಸ್ವಾಸ್ತöಯವನ್ನು ಕಾಪಾಡಲು  ರಾಷ್ಟçವನ್ನು ರಕ್ಷಣೆ ಮಾಡಲು ಶಾಸಕಾಂಗ – ನ್ಯಾಯಾಂಗಗಳ ಹಕ್ಕು ಭಾಧ್ಯತೆಗಳನ್ನು ಮತ್ತು ಅವುಗಳ ಘನತೆ-ಗೌರವವನ್ನು ರಕ್ಷಣೆ ಮಾಡಲು ಕಾರ್ಯಾಂಗ ಅಂದರೆ ಆಡಳಿತ ವ್ಯವಸ್ಥೆಯಲ್ಲಿ ಹಸ್ತ ಕ್ಷೇಪ ಮತ್ತು ಬಲವಂತ ಸುಳ್ಳು ಆಪಾದನೆಗಳಿಗಾಗಿ ಪತ್ರಕರ್ತ ಮತ್ತು ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ . ಇದರ ಮಧ್ಯ ಕೂಡ ಹಲವಾರು ಕಾಯ್ದೆಗಳು ಸಾಮಾನ್ಯರಂತೆ ಪತ್ರಕರ್ತರಿಗೂ ರಕ್ಷಣೆ ನೀಡುತ್ತದೆ. 1950 ರ ನಂತರ ಸಂವಿಧಾನ ತಿದ್ದುಪಡಿಗಳು  ಮತ್ತು ಕಾಯ್ದೆಗಳನ್ನು ರೂಪಿಸುವ ಮೂಲಕ ಮಾಧ್ಯಮ ರಂಗಕ್ಕೆ ಸರಕಾರವು ಒಂದಿಷ್ಡು ಅನುಕೂಲ ಮಾಡಿಕೊಟ್ಟಿದೆ. ಭಾರತೀಯ ಮಾಧ್ಯಮಕ್ಕೆ ಸಂಬ0ಧಿಸಿದ0ತೆ ಕೆಲವು ಕಾನೂನುಗಳು
    1. The Indian official secrets act-1923
    2. The Press (objectionable matters)act-1951
    3. The copyright act-1957
    4. The newspaper(price & page) act-1956
    5. The working Journalists (conditions at service) and miscellaneous provisions act-1955 & 1957
    6. Working Journalists and other news paper employees Tribunal Rules-1979
    7. The working Journalists (Fixation of rates at wages) act-1958
    8. The press council act-1965
    9. The delivery at books & news papers ( public libraries) act-1954 (amended in-1965)
    10. The parliamentary proceedings ( protection of publication ) act- 1956
    11. Prasar bharti (broadcasting cooperation of India) act-1990
    12. The press council act-1978.
    13. Right to information act-2005( freedom at information act-2005)
    14. Cable television networks (regulation) act-1995
    15. The trade marks act-1999-1995 (amendment 202)
    16. Information technology act-2000
    17. Critical evaluation of IT act(amendment)-2008
    18. Amendment in CTN rules-1994
    19. Cable Television networks (amendments) rules-2021
    20. The press & Registration at book act-1867

    ಈ ಎಲ್ಲಾ ಕಾನೂನುಗಳ ಜೊತೆಗೆ ಸಾರ್ವಜನಿಕರು ಮತ್ತು ಇನ್ನಿತರ ಕಾರ್ಮಿಕ ವರ್ಗಗಳಿಗೆ ಸಿಗಬಹದಾದ ಕಾನೂನುಗಳ ರಕ್ಷಣೆ ಮತ್ತು ಫಲಗಳು ದೊರೆಯುತ್ತವೆ. ಪತ್ರಿಕೆಗಳ ನೊಂದಾವಣಿಗಾಗಿ Govt at India  office at Registrar of news papers For India ಇದ್ದು TV, FM  ಸಮೂಹ ಬಾನುಲಿ ಕೇಂದ್ರಗಳು ಮತ್ತು ಕೇಬಲ್ DTH, MSO ಗಳಿಗಾಗಿ Ministry of Information & Broad casting ಇಲಾಖೆ ಇದೆ. ಈ ಇಲಾಖೆಯ ಮೂಲಕ data center, satellite TV Channels,  Temporary  uplinking , LCO, MSO’s  Teleports & psngs, DTH, HITS operators TRP Agencies, news Agencies, community Radio stations  & private FM Channels ಗಳನ್ನು  ನೊಂದಾವಣಿ ಮಾಡಬಹುದು. ಕೇಂದ್ರ ಸರಕಾರ / ರಾಜ್ಯ ಸರಕಾರಗಳು ವಾರ್ತಾ ಇಲಾಖೆಯ ಮೂಲಕ ಪತ್ರಕರ್ತರಿಗೆ ಹಲವಾರು  ಅನುಕೂಲಗಳನ್ನು ಮಾಡುತ್ತಿದ್ದಾರೆ. ಸರಕಾರದ ಕಾರ್ಯ ಕ್ರಮಗಳಿಗೆ  ಮಾಧ್ಯಮದವರಿಗೆ ಅವಕಾಶ, ಮಾಸಾಚನ, ಕೆಲ ರಾಜ್ಯ ಸರಕಾರಗಳು ಪತ್ರಕರ್ತರಿಗೆ ವಸತಿ ಯೋಜನೆಗಳಲ್ಲಿ  ಮೀಸಲಾತಿ ಕೂಡ ನೀಡುತೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪತ್ರಿಕೋಧ್ಯಮಕ್ಕೆ  ಗೌರವ ಸೂಚಿಸಲು ಹಲವಾರು ಪ್ರಶಸ್ತಿಗಳನ್ನು ನೀಡುತ್ತಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ  ಹಲವಾರು ಪ್ರಶಸ್ತಿಗಳಲ್ಲಿ  ಮಾಧ್ಯಮ ವಿಭಾಗವು ಇದೆ. ಇನ್ನು ಮಾಧ್ಯಮ ರಂಗಕ್ಕೆ  ಸಂಬ0ಧಿಸಿದ0ತೆ ಹಲವಾರು ಸಂಘ ಸಂಸ್ಥೆ, ವೇದಿಕೆ ಮತ್ತು ಕ್ಲಬ್‌ಗಳು  ಇದ್ದು ಮಾಧ್ಯಮ ಮತ್ತು ಪತ್ರಕರ್ತರ ರಕ್ಷಣೆ ಮಾಡುತ್ತಿವೆ. ಆದರೆ ಇದರ ಮಧ್ಯ ಕೆಲವು  ಕಾನೂನುಗಳು ಮಾಧ್ಯಮದ  ಸ್ವಾತಂತ್ರಕ್ಕೆ ತಡೆಗೋಡೆಯಾಗುತ್ತಿದೆ. ಅದರಲ್ಲಿ ಮುಖ್ಯವಾಗಿ 1. ಮಾನಹಾನಿ ಕೇಸ್, India penal code ನಲ್ಲಿ ಮಾನನಷ್ಟ ಕುರಿತು ಕ್ರಿಮಿನಲ್ ಕಾನೂನು 1860 ರಿಂದ ಜಾರಿಗೆ ಬಂದಿದೆ. India penal code 490 ಪ್ರಕಾರ ವ್ಯಕ್ತಿಯ ಹೆಸರು, ಚಾರಿತ್ರ, ಕೀರ್ತಿ, ಸಂಸ್ಥೆ ವ್ಯವಸ್ಥೆ  ಸರಕಾರ ಹಾನಿಯಾಗುವಂತೆ ಬರೆಯುವುದು, ಸುದ್ದಿ ಮಾಡುವುದು. TV/ FM ಅಥವಾ Social media ಗಳಲ್ಲಿ  ಪ್ರಸಾರ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. 2. Ipc -171 G ಪ್ರಕಾರ ಚುನಾವಣೆಯ ಸಂಬ0ಧವಾಗಿ ಸುಳ್ಳು ಹೇಳೀಕೆಯನ್ನು ಕೊಡುವುದು. 3. Ipc -295(A)  ಯಾವುದೇ ವರ್ಗದ ಜನರ ಧರ್ಮವನ್ನಾಗಲಿ , ಧಾರ್ಮಿಕ ನಂಬಿಕೆಯನ್ನಾಗಲಿ ಅವಮಾನಗೊಳಿಸುವುದರಿಂದ ಅವರ ಧಾರ್ಮಿಕ ಭಾವನೆಗಳಿಗೆ ಭಂಗ ಪಡಿಸುವ ಉದ್ದೇಶದಿಂದ ಮಾಡಿದ ಬುದ್ದಿ ಪೂರ್ವಕವಾದ ದುರ್ಭಾವನೆಯ ಕೃತ್ಯ. 4.Ipc -153A(1)  ಧರ್ಮ, ಜನಾಂಗ, ಜನ್ಮಸ್ಥಳ, ಭಾಷೆ, ಜಾತಿ ಸಮುದಾಯ ಅಥವಾ ಇನ್ನಿತರ ಯಾವುದೇ ಕಾರಣಗಳ ಮೇಲೆ ಬಿನ್ನ ಗುಂಪುಗಳಲ್ಲಿ ವೈರತ್ವವನ್ನು ಪ್ರದರ್ಶಿಸುವುದು ಸಾಮರಸ್ಯ ಪಾಲನೆಯ ಭಾವುಕವಾಗುವಂತಹ ಕೃತ್ಯಗಳನ್ನು ಎಸಗುವುದು. 5.Ipc -153(B) ರಾಷ್ಟಿಯ ಐಕ್ಯತೆಗೆ ಬಾಧಕವಾದ ಆರೋಪಗಳು ಮತ್ತು ಧೃಢೀಕಾರಕ ಹೇಳಿಕೆಗಳು.  6. ಸಂವಿಧಾನದ 21 ನೇ ಅನುಚ್ಚೇದ ಪಾಲಿಸಲೇಬೇಕು. 7.Ipc -500  ಮಾನಹಾನಿಗೆ ಶಿಕ್ಷೆ ಮತ್ತು ದಂಡ ಹಾಕಲಾಗುತ್ತದೆ. 8.Ipc -501 ಮಾನಹಾನಿಕಾರಕವೆಂದು ತಿಳಿದಿರುವ ವಿಷಯವನ್ನು ಮುದ್ರಣ ಮಾಡುವುದು ಇಲ್ಲ ಕೆತ್ತನೆ ಮಾಡುವುದು. 9. Ipc -502 ಮುದ್ರಣಗೊಳಿಸಲಾದ ಇಲ್ಲವೇ ಕೆತ್ತನೆ ಮಾಡಲಾದ ಮಾನ ಹಾನಿಕಾರಕ ವಿಷಯವುಳ್ಳ ಪದಾರ್ಥವನ್ನು ಮಾರಾಟ ಮಾಡುವುದು ಈ ಮೇಲಿನ ಎಲ್ಲಾ IPC ಈ ಕಾಯ್ದೆಗಳಲ್ಲಿ ಪತ್ರಕರ್ತರು ಸೇರಿದಂತೆ ಸಾರ್ವಜನಿಕರಿಗೂ ಶಿಕ್ಷೆ ಆಗುತ್ತದೆ. ಈ ಕಾಯ್ದೆಗಳು ಮಾಧ್ಯಮದವರಿಗೆ ರಿಯಾಯಿತಿ ನೀಡಿಲ್ಲ. ಕೆಲವು ಸಂಧರ್ಭದಲ್ಲಿ ಅಂದರೆ ಸತ್ಯ ಹೇಳಿದಾಗ ಆಪಾದನೆ ಸಾಬೀತಾದರೆ ರಾಷ್ಟ ಅಥವಾ ಸರಕಾರ ಸಾರ್ವಜನಿಕರಿಗೆ ಒಳಿತಾಗುವಂತಾದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ದೇಶದ್ರೋಹ ಕಾಯ್ದೆ ಕೂಡ 1860 ರಿಂದ ಜಾರಿಯಲ್ಲಿ ಇದು Ipc -121, 121(A), 122, 124(A) ಗಳು ದೇಶದ ಬಗ್ಗೆ ಪಿತೂರಿ ರೂಪಿಸುವ ವ್ಯಕ್ತಿ ಅಥವಾ ಮಾಧ್ಯಮದವರನ್ನು ಶಿಕ್ಷೆ ಕೊಡಲು ಬಳಸಲಾಗುತ್ತದೆ.

    ಅಶ್ಲೀಲತೆ:- ಅಶ್ಲೀಲ ಬರವಣಿಗೆ ಮತ್ತು ಪ್ರಸಾರವನ್ನು ನಿರ್ಬಂಧಿಸಲಾಗಿದೆ. ಭಾರತದ ಸಂವಿಧಾನದ 19 ನೇ ಅನುಚ್ಚೇದ 2ನೇ ಕಾಲಂ ಪ್ರಕಾರ Ipc-292, 292(1), 292(2)_292(2)E,293, 294 ಕಾಲಂಗಳು ಅಶ್ಲೀಲ, ಕಾಮ ಕ್ರೀಡೆ, ಕೆಟ್ಟ ಮುದ್ರಣ ಮತ್ತು ಪ್ರಸಾರ ಮಾರಾಟವನ್ನು ನಿಷೇಧಿಸುವ ಜೊತೆಗೆ ಉಗ್ರ  ಶಿಕ್ಷೆಯ ಜೊತೆಗೆ ದಂಡ ವಿಧಿಸುವ ಅಧಿಕಾರವು ಇದೆ. 1898 Indian post office act ಪ್ರಕಾರ ಅಶ್ಲೀಲತೆ ಪ್ರಕಟಣೆಯ ಪುಸ್ತಕಗಳನ್ನು ಅಂಚೆ ಮೂಲಕ ಕಳಿಸುವುದನ್ನು ತಡೆ ಹಿಡಿಯುವ ಅಧಿಕಾರ ಇದೆ.

    ಸ್ವಾತಂತ್ರಯ ಪೂರ್ವದಲ್ಲಿ ಬ್ರಿಟಿಷರು ಪತ್ರಿಕೆಗಳನ್ನು ಹತ್ತಿಕ್ಕಲು ಹಲವಾರು ಕಾಯ್ದೆಗಳನ್ನು ರೂಪಿಸಿದರು. ಸ್ವಾತಂತ್ರಯ ನಂತರ ದೇಶದಲ್ಲಿ ಅಮೂಲ್ಯವಾದ ಬದಲಾವಗನೆ ಆಗುತ್ತಾ ಮಾಧ್ಯಮ ಸ್ನೇಹಿ ರಾಷ್ಟದ ಪರಿಕಲ್ಪನೆ ಪ್ರಾರಂಭವಾಗಿದೆ.

    ನ್ಯಾಯಾಲಯ ನಿಂದನೆ:- ನ್ಯಾಯಾಲಯದ ಒಳಗಿನ ಸುದ್ದಿಗಳನ್ನು ಮಾಡುವಂತಿಲ್ಲ. ಜೊತೆಗೆ ನ್ಯಾಯಾಲಯ ಅಥವಾ ನ್ಯಾಯಾಲಯ  ನೀಡುವ ತೀರ್ಪುಗಳನ್ನು ನಿಂದನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ನ್ಯಾಯಾಲಯ ನಿಂದನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.

    ಮಾಧ್ಯಮ ಶಾಸನಗಳು (media acts):- ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಅತ್ಯಂತ ಪ್ರಭಾವಶಾಲಿ ಸಾಧನ. ದೃಶ್ಯ, ಶ್ರವಣ ಮಾಧ್ಯಮಗಳಾದ  ಟೆಲಿವಿಷನ್ ಇಂಟರ್‌ನೆಟ್, ವೃತ್ತ ಪತ್ರಿಕೆ, ರೆಡಿಯೋ ಸೇರಿದಂತೆ ಒಟ್ಟಾರೆ ಮಾಧ್ಯಮವು ಹಲವಾರು ಕಾಯ್ದೆಗಳ ಅಡಿಪಾಯದಲ್ಲಿ ನಿಂತಿದೆ.

    1. The press & registration at books act-1867
    2. The copy Right Act-1952
    3. The official secrets Act-1923
    4. Parliamentary Proceedings (public security)Act-1956
    5. The contempt at courts Act-1971

    ಇವುಗಳ ಮಾಧ್ಯಮ ಪರ ಮತ್ತು ವಿರುದ್ದವಾದ ಬೆಳಕು ಚೆಲ್ಲುತ್ತಾ ದೇಶದ ಮಾಧ್ಯಮವನ್ನು ಅಭಿವೃದ್ಧಿಯ ಜೊತೆಗೆ ನಿಯಂತ್ರಣ ಮಾಡಲಾಗುತ್ತಿದೆ. ಭಾರತೀಯ ಅಧಿಕೃತ ಗೌಪ್ಯತಾ ಕಾಯ್ದೆಯ IPC ಗಳ ಪ್ರಕಾರ ಹಲವಾರು ಇಲಾಖೆಗಳು ಮಾಹಿತಿಯನ್ನು ಕೇಳಿದಾಗ ನೀಡುವುದಿಲ್ಲ. ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ಮಾಧ್ಯಮಗಳನ್ನು ನೈತಿಕವಾಗಿ ಮತ್ತು ಬೌಧ್ಧಿಕವಾಗಿ ಕೊಂಡುಕೊಳ್ಳುತ್ತಿದ್ದು ಪ್ರಾಮಾಣಿಕ ಪರ್ತಕರ್ತ ಅಥವಾ ಮಾಧ್ಯಮಗಳು ಸತ್ರ ತನಿಖಾ ವರದಿಗೆ ನಿಂತಾಗ ಆಗುವ ತೊಂದರೆಗಳು ಹಲವು ಅವುಗಳೆಂದರೆ

    1. ಮಾನಹಾನಿ ಕೇಸ್ ಹಾಕುವುದು.
    2. ಜಾತಿನಿಂದನೆ ಕೇಸ್ ಹಾಕುವುದು.
    3. ಅತ್ಯಾಚಾರದಂತಹ ಕೇಸ್ ಗಳನ್ನು ಹಾಕುವುದು.

    4.ಕಿರುಕುಳ ಅಥವಾ ಗೌಪ್ಯ ಮಾಹಿತಿ ಕೇಳಿದ್ದಾರೆ ಎನ್ನುವುದು.

    5.ಸರಕಾರಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸುಳ್ಳು ಕೇಸ್ ಹಾಕುವುದು.

    6.ದೇಶದ್ರೋಹದ ಆರೋಪ ಹೊರಿಸುವುದು.

    1. ಕರ್ತವ್ಯಕ್ಕೆ ಅಡ್ಡಿ ಪಡಿಸಿದ India penal code ಪ್ರಕಾರ ದೂರ ನೀಡುವುದು IPC 353 ರ ಪ್ರಕಾರವು ದೂರು ನೀಡುತ್ತಾರೆ.

    ಹೀಗೆ ಹಲವಾರು ಮುಖಗಳಿಂದ ಪತ್ರಕರ್ತರ ಅಥವಾ ಮಾಧ್ಯಮದ ಮೇಲೆ ದಾಳಿ ಆಗುತ್ತದೆ. ದೈಹಿಕ ದಾಳಿಗಿಂತ ಮಾನಸಿಕ ಮತ್ತು ಕಾನೂನಾತ್ಮಕ ದಾಳಿ ಅತ್ಯಂತ ಭಯಾನಕವಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ working  journalists  act ಪ್ರಕಾರ ಕೆಲಸದ ಅವಧಿ ,ಸಂಬಳ, ರಜೆ, ಹುದ್ದೆ ಮತ್ತು ಗೌರವದ ಬಗ್ಗೆ

    ತಿಳಿಸುತ್ತದೆ. ಈ ನಿಯಮಗಳನ್ನು ಸಣ್ಣ ಮಾಧ್ಯಮಗಳು ಪಾಲಿಸಲು ಆಗುವುದಿಲ್ಲ. ವಿದೇಶಿ ಬಂಡವಾಳವನ್ನು ಮಾಧ್ಯಮದಲ್ಲಿ ಅನುಪಾತ ರೀತಿ ನಿರ್ಧಾರ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ದೇಶದಲ್ಲಿ ಬಲಿಷ್ಠ ದೊಡ್ಡ ದೊಡ್ಡ ಬಂಡವಾಳ ಶಾಹಿಗಳ ಕೈಯಲ್ಲಿ ಮಾಧ್ಯಮಗಳು ನಡೆಯುತ್ತಿದ್ದು  ಈ ಕಾರಣಗಳಿಂದ ಮಾಧ್ಯಮಗಳು ರಾಜಕೀಯ ಪಕ್ಷ ರಾಜಕಾರಣ ಧರ್ಮ, ಜಾತಿ, ಭಾಷೆಯ ಮಾಡುತ್ತಾ ತಮ್ಮ ಪ್ರಕಾರ TRP ಗಳಿಗಾಗಿ ಮಾತ್ರ ಪ್ರಯತ್ನಿಸುತ್ತಿವೆ ಹೊರತು ಸಿದ್ದಾಂತ ಮಾಧ್ಯಮ ಧರ್ಮವನ್ನು ಪಾಲಿಸುತ್ತಿಲ್ಲ. Accredited journalist ಗಳಿಗೆ ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಪ್ರವೇಶ parliamentary proceedings & privileges Act ಜಾರಿಗೆ ತಂದರು ಕೂಡ ಇತ್ತೀಚಿನ  ತಿದ್ದುಪಡಿಗಳು ಮತ್ತು ಘಟನೆಗಳಿಂದ ಹಲವಾರು ರಾಜ್ಯಗಳು ಪ್ರವೇಶವನ್ನು ನಿಷೇಧಿಸಿ ದೂರದರ್ಶನಕ್ಕೆ ಮಾತ್ರ ಅವಕಾಶ ನೀಡಿವೆ. ಭಾರತದ ಪತ್ರಿಕಾ ಮಂಡಳಿ (press council of India) ಮಾಧ್ಯಮದ ಸ್ವಾತಂತ್ರ  ಪತ್ರಕರ್ತರಿಗೆ ನೀತಿ ಸಂಹಿತೆ, ಮಾಧ್ಯಮಕ್ಕೆ ಮಾರ್ಗಸೂಚಿಗಳನ್ನು ರೂಪಿಸುತ್ತದೆ. ಆದರೂ ಕೂಡ ಮಾಧ್ಯಮದ ಮೇಲೆ ನಡೆಯುತ್ತಿರುವ ಕೊಲೆ ಬೆದರಿಕೆ , ಹತ್ಯೆ, ಭಯ ಹುಟ್ಟಿಸುವುದು ಅಪಹರಣ ಅತ್ಯಾಚಾರ ಸುದ್ದಿಗಾಗಿ ಮಾಧ್ಯಮವನ್ನು ಸೃಷ್ಠಿಸುವುದು ಅಥವಾ ಕೊಂಡುಕೊಳ್ಳುವುದು ದೇಶದಲ್ಲಿ ನಡೆಯುತ್ತಲೇ ಇದೆ.

    ಅಂತರಾಷ್ಟಿಯ ಮಟ್ಟದಲ್ಲಿ ಭಾರತೀಯ ಪತ್ರಕರ್ತರಿಗೆ ಸ್ವಾತಂತ್ರದ ಕೊರತೆ ಎದ್ದು ಕಾಣುತ್ತಿದೆ. ಸಂಪನ್ಮೂಲದ ಕೊರತೆ  ಕಾನೂನುಗಳು ಪರ-ವಿರೋಧ ಜ್ಞಾನದ ಕೊರತೆ , ಶಿಕ್ಷಣದ ಕೊರತೆಗಳಿಂದ ದೇಶದ ಮಾಧ್ಯಮ ವ್ಯವಸ್ಥೆಯು ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿ ಇದ್ದು ಇದರಿಂದ ನೊಂದಾವಣಿಯಾದ ಪತ್ರಿಕೆಗಳಲ್ಲಿ ಶೇ2% ರಷ್ಟು ಮಾತ್ರ ನಡೆಯುತ್ತಿದ್ದು ಉಳಿದವು ಹೆಸರಿಗೆ ಮಾತ್ರ ಉಳಿದಿವೆ. ಮಾಧ್ಯಮ ಬೆಳವಣಿಗೆ ಜೊತೆಗೆ ಸಣ್ಣ ಮಾಧ್ಯಮಗಳ ಅವನ್ನತಿಯೂ ಆಗುತ್ತಿದೆ.

    “ ಮಾಧ್ಯಮದಲ್ಲಿ ಇರುವವರು ಕಾನೂನು ಅರಿಯಬೇಕು ಜೊತೆಗೆ ಪ್ರಶ್ನಾತೀತ ಚಿಹ್ನೆ ಮತ್ತು ಉದ್ಗಾರ ವಾಚಕ ಚಿಹ್ನೆಗಳ ಬಗ್ಗೆ ತಿಳಿದಿರಬೇಕು ಜನರಿಗೆ ಸುದ್ದಿ ಜೊತೆಗೆ ಮಾಹಿತಿ ಸತ್ಯದ ದರ್ಶನ ಮೂಡಿಸಬೇಕು”

    ರಮೇಶ್ ಎಸ್.ಜಿ.

    ಸಂಪಾದಕರು

    ಕನಸಿನ ಭಾರತ