ಕರ್ನಾಟಕ ಪ್ರೆಸ್ ಕ್ಲಬ್ ವು ಕಾನೂನಿನ ಮಾನ್ಯತೆ ಪಡೆದು ಕರ್ನಾಟಕದ ಮಾಧ್ಯಮ ಮಿತ್ರರ ದೊಡ್ಡ ಸಂಘಟನೆಯಾಗಿದೆ. ಅಪ್ಪಟ ಕನ್ನಡಿಗರೇ ಮತ್ತು ಕರ್ನಾಟಕದಲ್ಲಿ ಮಾಧ್ಯಮವನ್ನು ನಡೆಸುತ್ತಿರುವ ಅನುಭವಿಗಳು ಕಟ್ಟಿರುವ ಕ್ಲಬ್ ಇದಾಗಿದೆ. ಕರ್ನಾಟಕದಲ್ಲಿ ಸುಮಾರು 650 ಕ್ಕೂ ಹೆಚ್ಚು ಮಾಧ್ಯಮ ಸಂಘಟನೆಗಳು ಇರುವುದರಿಂದ ತತ್ವ ಸಿದ್ಧಾಂತಗಳು ಬೇರೆ ಬೇರೆಯಾಗಿರುವುದರಿಂದ ಮಾಧ್ಯಮದವರಿಗೆ ಸಂಪೂರ್ಣವಾದ ನ್ಯಾಯ ದೊರೆತಿಲ್ಲ. ವರದಿಗಾರರಿಗೊಂದು ಸಂಘ, ಸಂಪಾದಕರಿಗೊಂದು ಸಂಘ, ಕಾರ್ಯನಿರತ ಮಾಧ್ಯಮದವರಿಗೊಂದು ಸಂಘ, ಟಿ.ವಿ. ಸಂಘ, ಕೇಬಲ್ ಆಪರೇಟರ್ ಸಂಘ, ಪತ್ರಿಕೆ ವಿತರಕರ ಸಂಘ ಹೀಗೆ ಮಾಧ್ಯಮವು ಹಲವಾರು ಸಂಘ ಸಂಸ್ಥೆಗಳ ಅಡಿಯಲ್ಲಿ ಹಂಚಿ ಹೋಗಿದ್ದರಿಂದ ಮಾಧ್ಯಮದ ಏಕತೆಗೆ ಧಕ್ಕೆ ಉಂಟಾಗು ಜೊತೆಗೆ ಮಾಧ್ಯಮದವರ ಮೇಲೆ ನಡೆಯುತ್ತಿರುವ ಬಾಹ್ಯ ಮತ್ತು ಆಂತರಿಕ ಹಲ್ಲೆಗಳು ಮಾನಸಿಕ ಒತ್ತಡಗಳು ಹೆಚ್ಚಾಗುತ್ತಿದ್ದು ನಕಲಿ ಪತ್ರಕರ್ತರ ಹಾವಳಿಯಿಂದ ಮಾಧ್ಯಮದ ಪವಿತ್ರತೆ ಹಾಳಾಗುತ್ತಿದೆ.
1) ಎಲ್ಲಾ ಮಾಧ್ಯಮದವರನ್ನು ಒಂದೇ ವೇದಿಕೆಯಲ್ಲಿ ಸಮಾನ ಗೌರವದಿಂದ ಕಾಣುವುದು.
2) ನಕಲಿ ಪತ್ರಕರ್ತರು ಮತ್ತು ನಕಲಿ ಮಾಧ್ಯಮಗಳ ಹಾವಳಿ ತಪ್ಪಿಸುವುದು.
3) ಪತ್ರಕರ್ತರ ಮತ್ತು ಅವರ ಅವಲಂಬಿತ ಕುಟುಂಬಗಳಿಗೆ ದೈಹಿಕ ಮತ್ತು ಮಾನಸಿಕ ಭದ್ರತೆ ಒದಗಿಸುವುದು.
4) ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು.
5) ಸರ್ಕಾರ ಅಥವಾ ಸ್ಥಳೀಯ ಅಥವಾ ದಾನಿಗಳ ಸಹಕಾರದೊಂದಿಗೆ ಪ್ರತಿ ಜಿಲ್ಲೆಯಲ್ಲಿ ಒಂದರಂತೆ ಪತ್ರಕರ್ತರ ಕ್ಲಬ್ ಮತ್ತು ಪತ್ರಕರ್ತರ ವಸತಿ ಬಡಾವಣೆಯನ್ನು ನಿರ್ಮಿಸುವುದು.
6) ಮಾಧ್ಯಮದ ಧರ್ಮಪಾಲನೆ ನೈತಿಕತೆಯನ್ನು ಎತ್ತಿ ಹಿಡಿಯುವುದು.
7) ಮಾಧ್ಯಮದವರಿಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಮಾಧ್ಯಮ ಕುರಿತು ವಿಷಯ ಆಧಾರಿತ ಶಿಬಿರಗಳನ್ನು ನಡೆಸುವುದು.
8) ಪತ್ರಕರ್ತರಿಗೆ ವಿಶೇಷ ಸನ್ಮಾನ ಮತ್ತು ಗೌರವಗಳನ್ನು ಪ್ರತಿ ವರ್ಷ ನೀಡುವುದರ ಜೊತೆಗೆ ಮಾಧ್ಯಮ ಕುಟುಂಬದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದು.

ಇಂತಹ ಅತ್ಯಮೂಲ್ಯವಾದ ಉದ್ದೇಶವನ್ನಿಟ್ಟುಕೊಂಡು ಎಲ್ಲಾ ಮಾಧ್ಯಮದವರನ್ನು ಒಂದೇ ವೇದಿಕೆಯಲ್ಲಿ ತಂದು ಮಾಧ್ಯಮದವರ ಅಭಿವೃದ್ದಿಗಾಗಿ ಪ್ರಯತ್ನಿಸುವ ಕರ್ನಾಟಕ ಪ್ರೆಸ್‍ ಕ್ಲಬ್ ಅನ್ನು ಪ್ರತಿಯೊಬ್ಬ ಪತ್ರಕರ್ತರು ಸೇರಿ ಬೆಳೆಸಬೇಕು. ಇಲ್ಲಿ ಎಲ್ಲರಿಗೂ ಅವಕಾಶಗಳಿದ್ದು ಕಾನೂನಿನ ಅಡಿಯಲ್ಲೇ ಕಾರ್ಯನಿರ್ವಹಿಸುವುದರಿಂದ ಕನ್ನಡಿಗರ ಅಥವಾ ಕರ್ನಾಟಕದ ಈ  ಕ್ಲಬ್‍ಗೆ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಸೇರಿ ಒಗ್ಗಟ್ಟು ಪ್ರದರ್ಶನ ಮಾಡಬೇಕು.