ಕರ್ನಾಟಕ ಪ್ರೆಸ್‍ಕ್ಲಬ್ ಸದಸ್ಯತ್ವ ಪಡೆಯಲು 18 ವರ್ಷ ಮೇಲ್ಪಟ್ಟ ಭಾರತದ ಪೌರತ್ವ ಹೊಂದಿರುವ ಮಾಧ್ಯಮದಲ್ಲಿ ಯಾವುದಾದರೂಊ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಿಯೊಬ್ಬರಿಗೂ ಅವಕಾಶ ಇದೆ. ದಿನ, ವಾರ, ಪಾಕ್ಷಿಕ ಮತ್ತು ಮಾಸ ಪತ್ರಿಕೆ ಸೇರಿದಂತೆ ಮುದ್ರಣ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ವರದಿಗಾರ, ಫೋಟೋಗ್ರಾಫರ್, ಪತ್ರಿಕೆ ಡಿಸೈನರ್, ಉಪ ಸಂಪಾದಕರು, ಸಂಪಾದಕರು, ಪತ್ರಿಕೆಗಾಗಿ ವಿಶೇಷ ಲೇಖನ ಬರೆಯುವವರು, ಹವ್ಯಾಸಿ ಸುದ್ದಿ ಬರಹಗಾರರು, ಪತ್ರಿಕೆ ವಿತರಕರು, ಮಾಧ್ಯಮ ಶಿಕ್ಷಕರು ಮತ್ತು ಚಾನಲ್‍ಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರು, ಕ್ಯಾಮರಾ ಮೆನ್, ಡಿಸೈನರ್, ಕಾರ್ಯಕ್ರಮ ಮುಖ್ಯಸ್ಥರು, ಚಾನಲ್‍ನ ಆಫೀಸ್‍ನ ಒಳಗೆ ಕಾರ್ಯನಿರ್ವಹಿಸುವವರು, ತಾಂತ್ರಿಕ ಸೇರಿದಂತೆ ಸುದ್ದಿ ವಾಚಕರು, ಗೌಪ್ಯವಾಗಿ, ಸುದ್ದಿ ನೀಡುವವರು ಇನ್ನು ಮುಂತಾದ ವಿಭಾಗಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರು ಸೇರಬಹುದು.